Home> Karnataka
Advertisement

HD Kumaraswamy : ದೇವೇಗೌಡರ ಆರೋಗ್ಯ ಸ್ಥಿತಿ ನೆನೆದು ಕಣ್ಣೀರಿಟ್ಟ ಕುಮಾರಸ್ವಾಮಿ!

ಪಂಚರತ್ನ ರಥಯಾತ್ರೆ ತಿಪಟೂರು ಬಿಟ್ಟು ಉಳಿದ ಕಡೆ ಯಶಸ್ವಿಯಾಗಿದೆ. ದೇವೇಗೌಡರಿಗೆ ಸಂಕಷ್ಟದಲ್ಕಿ ಕೈ ಹಿಡಿದ ತಾಲೂಕಿನ ತಿಪಟೂರು ಎಂದು ಮಾಜಿ ಪ್ರಧಾನಿಗಳ ಆರೋಗ್ಯ ಸ್ಥಿತಿ ನೆನೆದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ. 

HD Kumaraswamy : ದೇವೇಗೌಡರ ಆರೋಗ್ಯ ಸ್ಥಿತಿ ನೆನೆದು ಕಣ್ಣೀರಿಟ್ಟ ಕುಮಾರಸ್ವಾಮಿ!

ತುಮಕೂರು : ಪಂಚರತ್ನ ರಥಯಾತ್ರೆ ತಿಪಟೂರು ಬಿಟ್ಟು ಉಳಿದ ಕಡೆ ಯಶಸ್ವಿಯಾಗಿದೆ. ದೇವೇಗೌಡರಿಗೆ ಸಂಕಷ್ಟದಲ್ಕಿ ಕೈ ಹಿಡಿದ ತಾಲೂಕಿನ ತಿಪಟೂರು ಎಂದು ಮಾಜಿ ಪ್ರಧಾನಿಗಳ ಆರೋಗ್ಯ ಸ್ಥಿತಿ ನೆನೆದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ. 

ತಿಪಟೂರಿನ ಕಲ್ಪತರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ, ದೇವೇಗೌಡರು ತುಮಕೂರಿಗೆ ನೀರಿನಲ್ಲಿ ಮೋಸ ಮಾಡಿದರಯ ಎಂದು ಅಪಪ್ರಚಾರ ಮಾಡಿದರು. ಆದರೆ ಸತ್ಯ ಬೇರೆ ಇದೆ. ತಿಪಟೂರು ಜೆಡಿಎಸ್ ಪಕ್ಷದ ಭದ್ರ ಕೋಟೆ. ದೇವೇಗೌಡರು ಲೋಕಸಭೆಗೆ ಸ್ಪರ್ಧಿಸಿದಾಗ ಅತ್ಯಂತ ಹೆಚ್ಚಿನ ಮತ ಕೊಟ್ಟಿದ್ದು ನಾನು ಮರೆಯಲ್ಲ. ದೇವೇಗೌಡರು, ರೇವಣ್ಣ ಅವರ ಕುರಿತು ನೀರಾವರಿ ವಿಚಾರದಲ್ಲಿ ಕೆಟ್ಟ ರೀತಿಯಲ್ಲಿ ಬಿಂಬಿಸಿದ್ದಾರೆ ಎಂದರು.

ಇದನ್ನೂ ಓದಿ : Govind Karjol : 'ನೀರಾವರಿ ಇಲಾಖೆಯಲ್ಲಿ 400 ಹುದ್ದೆ ನೇಮಕಕ್ಕೆ ಅನುಮತಿ'

ನಿಜವಾಗಿಯೂ ದೇವೇಗೌಡರ ಹೋರಾಟದ ಫಲವಾಗಿ ಹೇಮಾವತಿ ಜಲಾಶಯ ನಿರ್ಮಾಣ ಆಯಿತು. ಜಲಾಶಯ ಇಲ್ಲ ಅಂದರೆ ತುಮಕೂರಿಗೆ ಹೇಗೆ ನೀರು ಸಿಕ್ತಿತ್ತು? ನಾನು ಎರಡನೇ ಬಾರಿ ಸಿಎಂ ಆದಾಗ ಹೇಮಾವತಿ ನಾಲೆ ಹೂಳೆತ್ತಲು ಹಣ ಬಿಡುಗಡೆ ಮಾಡಿದ್ದೇನೆ. ಕೊನೆ ಉಸಿರು ಇರುವರೆಗೂ ನಮ್ಮ ಕುಟುಂಬ ಈ ಜಿಲ್ಲೆಯ ಜನತೆಗೆ ಮೋಸ ಮಾಡೋಲ್ಲ. ಇವತ್ತಿನ ರಾಜ್ಯ ಸರ್ಕಾರ ನೀರಾವರಿ ಯೋಜನೆಯನ್ನು ಕಡೆಗಣಿಸಿದೆ. ಸರ್ಕಾರದ ಧೋರಣೆ ನೋಡಿದರೆ ಇನ್ನೂ 50 ವರ್ಷ ಆದರೂ ನೀರಾವರಿ ಯೋಜನೆ ಪೂರ್ಣ ಆಗಲ್ಲ. ದೇವೇಗೌಡರು ಇನ್ನೂ ಹೊರಾಟ ಮಾಡುವ ಸ್ಥಿತಿಯಲ್ಲಿ ಇಲ್ಲ. ಕಳೆದ ಲೋಕಸಭೆಯಲ್ಲಿ ನಾವು ತೆಗೆದುಕೊಂಡ ನಿರ್ಧಾರ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಅವರ ಸ್ಥಿತಿ ಕಂಡರೆ ನನಗೆ ದುಃಖ ಆಗುತ್ತದೆ ಎಂದು  ದೇವೇಗೌಡರ ಸ್ಥಿತಿ ಕಂಡು ಕುಮಾರಸ್ವಾಮಿ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ : 26 ಸಾವಿರ ಕೋಟಿ ರೈತರ ಸಾಲವನ್ನ ಮನ್ನಾ ಮಾಡಿದ ಕೀರ್ತಿ ಕುಮಾರಣ್ಣನಿಗೆ....

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More